
ಹೊಲಿ ರಿಡಿಮರ್ ಚರ್ಚ್ ಬೆಳ್ತಂಗಡಿ ಇಲ್ಲಿಯ ಪಾಲಕರ ದಿನ ಹಾಗೂ ದಿವ್ಯಮಂದಿರದ ದಶಮಾನೋತ್ಸವ ಸಮಾರಂಭವು 06.08.2022ನೇ ಶನಿವಾರರಂದು ಪೂರ್ವಾಹ್ನ 9:30ಕ್ಕೆ ಸಂಭ್ರಮದ ಬಲಿಪೂಜೆಯೊಂದಿಗೆ ಆರಂಭಗೊಂಡಿತು. ಮಂಗಳೂರು ವಲಯದ ಪ್ರಧಾನ ಧರ್ಮಗುರುಗಳಾಗಿರುವ ವಂ| ಸ್ವಾಮಿ ಜೇಮ್ಸ್ ಡಿ’ಸೋಜ ಇವರು ಬಲಿಪೂಜೆಯನ್ನು ನೆರವೇರಿಸಿ, ಶಕ್ತಿನಗರ ದೇವಮಾತಾ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಸ್ವಾಮಿ ಜೆರಾಲ್ಡ್ ಡಿ’ಸೋಜ ಇವರು ಪ್ರವಚನವನ್ನು ನೀಡಿದರು. ಹೊಲಿ ರಿಡಿಮರ್ ಚರ್ಚ್, ಇದರ ಪ್ರಧಾನ ಧರ್ಮಗುರುಗಳಾದ ವಂ| ಸ್ವಾಮಿ ಜೊಸೇಫ್ ಕಾರ್ಡೊಜಾ, ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾರುಗಳಾದ ವಂ| ಸ್ವಾಮಿ ಕ್ಲಿಫರ್ಡ್ ಪಿಂಟೊ, ಬೆಳ್ತಂಗಡಿ ವಲಯದ ಎಲ್ಲಾ ಚರ್ಚಿನ, ಈ ಹಿಂದೆ ಚರ್ಚಿನಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಹಾಗೂ ಬೆಳ್ತಂಗಡಿ ಚರ್ಚಿನ ಮತ್ತು ತಾಲೂಕಿನ ಭಕ್ತಾದಿಗಳು ದಿವ್ಯಬಲಿ ಪೂಜೆಯಲ್ಲಿ ಭಾಗಿಯಾಗಿದ್ದರು.
ಬಳಿಕ ಹೊಲಿ ರಿಡಿಮರ್ ಆಡಿಟೋರಿಯಂನಲ್ಲಿ ದಶಮಾನೋತ್ಸವದ ವೇದಿಕೆಯಲ್ಲಿ ಸಮಾರಂಭ ನೇರವೇರಿತು. ವೇದಿಕೆಯ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಲಯ ಹಾಗೂ ಬೆಳ್ತಂಗಡಿ ಹೊಲಿ ರಿಡಿಮರ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಸ್ವಾಮಿ ಜೊಸೇಫ್ ಕಾರ್ಡೊಜಾ ಇವರು ವಹಿಸಿ, ನೂತನ ಚರ್ಚಿನ ದಶಮಾನೋತ್ಸವದ ಸಂದರ್ಭ ಚರ್ಚ್ ನಿರ್ಮಾದ ರುವಾರಿಗಳಾದ ವಂ| ಸ್ವಾಮಿ ಜೇಮ್ಸ್ ಡಿ’ಸೋಜ, ವಂ| ಸ್ವಾಮಿ ಜೆರಾಲ್ಡ್ ಡಿ’ಸೋಜ, ಕಳೆದ ಹತ್ತು ವರ್ಷಗಳಲ್ಲಿ ಸೇವೆ ಸಲ್ಲಿಸಿದ ಸಹಾಯಕ ಧರ್ಮಗುರುಗಳು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಸಂಯೋಜಕರು, ಸಂತ ತೆರೇಸಾ ಕಾನ್ವೆಂಟಿನ ಸುಪಿರೀಯರ್‍ಗಳು, ಗುರಿಕಾರರುಗಳು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.
ಚರ್ಚಿನ ಗಾಯನ ಮಂಡಳಿ ವತಿಯಿಂದ ಪ್ರಾರ್ಥನಾ ಗೀತೆ ಹಾಗೂ ಶಾಲಾ ಮಕ್ಕಳಿಂದ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸುಪಿರೀಯರ್ ಸಿ. ಜೆಸಿಂತಾ ಬರೆಟ್ಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹತ್ತು ವರ್ಷದ ವರದಿಯನ್ನು ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪೌಲಿನ್ ರೇಗೊ ಇವರು ವಾಚಿಸಿದರು. ವಂ| ಸ್ವಾಮಿ ಕ್ಲಿಫರ್ಡ್ ಪಿಂಟೊ ಇವರು ಸ್ವಾಗತಿಸಿ, ಶ್ರೀ ವಿನ್ಸೆಂಟ್ ಟಿ. ಡಿ’ಸೋಜ ಇವರು ಧನ್ಯವಾದವಿತ್ತರು. ಶ್ರೀ ಜೋನ್ ಅರ್ವಿನ್ ಡಿ’ಸೋಜ ಹಾಗೂ ಕು| ರೆಲಿಶಾ ರೊಡ್ರಿಗಸ್ ಇವರು ಕಾರ್ಯಕ್ರಮ ನಿರೂಪಿಸಿದರು.

