
ದೇವರು ನಮ್ಮನ್ನು ಕಾಪಾಡಿ ರಕ್ಷಿಸಿದ್ದಾರೆ ಅವರಿಗೆ ನಾವು ಸದಾ ಚಿರಋಣಿ ಗಳಾಗಿರಬೇಕು ಎಂದು ಹೋಲಿ ರಿಡೀಮರ್ ದೇವಾಲಯದ ಪ್ರಧಾನ ಧರ್ಮಗುರುಗಳು ವಂ. ಬೊನಾವೆಂಚರ್ ನಜ್ರೆತ್ ರವರು ತಮ್ಮ ವಿದಾಯ ಭಾಷಣದಲ್ಲಿ ನುಡಿದರು.
ಹೋಲಿ ರೆಡಿಮರ್ ಚರ್ಚ್ ಬೆಳ್ತಂಗಡಿ ಇಲ್ಲಿ ಗುರುವಾರದಂದು ಪವಿತ್ರ ಬಲಿಪೂಜೆಯ ನಂತರ ವಂ. ಬೊನಾವೆಂಚರ್ ನಜ್ರೆತ್ ಇವರಿಗೆ ವಿಧಯ ಸಮಾರಂಭವನ್ನು ಭಕ್ತಾದಿಗಳು ನೆರವೇರಿಸಿದರು.
ಕಳೆದ ಆರು ವರ್ಷಗಳಲ್ಲಿ ಪೂಜ್ಯರು ನೀಡಿದಂತಹ ಸೇವೆಯನ್ನು ಶ್ಲಾಘಿಸಿ ಮುಂದಿನ ಅವರ ಜೀವನಕ್ಕೆ ಶುಭವಾಗಲೆಂದು ವಂ. ಜೇಸನ್ ಮೋನಿಸ್ ಪ್ರಾಂಶುಪಾಲರು ಹೋಲಿ ರಿಡೀಮರ್ ವಿದ್ಯಾಸಂಸ್ಥೆ ಇವರು ಭಕ್ತಾದಿಗಳ ಪರವಾಗಿ ಪೂಜ್ಯರಿಗೆ ಶುಭಕೋರಿದರು.
ಪೂಜ್ಯರಿಗೆ ವಂ. ಜೇಸನ್ ಮೋನಿಸ್ ಶಾಲನ್ನು ಹೊದಿಸಿ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರು ಸನ್ಮಾನ ಪತ್ರವನ್ನು ಅರ್ಪಿಸಿ, ಕಾರ್ಯದರ್ಶಿಯವರು ಹೂಗುಚ್ಛವನ್ನು ಇತ್ತು ಸನ್ಮಾನಿಸಿದರು.









ಶ್ರೀಯುತ ಜಾನ್ ಆರ್ವಿನ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಯುತ ಲ್ಯಾನ್ಸಿ ಪಿರೇರಾ ಇವರು ವಂದಿಸಿದರು.
ಕಾರ್ಯಕ್ರಮದಲ್ಲಿ ಈ ಹಿಂದೆ ಹೋಲಿ ರಿಡೀಮರ್ ದೇವಾಲಯದಲ್ಲಿ ಸೇವೆಸಲ್ಲಿಸಿದ ಧರ್ಮಗುರುಗಳು ವಂ. ಅನಿಲ್ ಪ್ರಕಾಶ್ ಡಿಸಿಲ್ವಾ, ವಂ. ಮೆಲ್ವಿನ್ ಡಿಸೋಜಾ ಹಾಗೂ ಪವಿತ್ರ ಶಿಲುಬೆ ಚರ್ಚ್ ಮಂಜೊಟ್ಟಿ ಇಲ್ಲಿನ ಧರ್ಮಗುರು ವಂ. ಪ್ರವೀನ್ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಸದಸ್ಯರು ಮತ್ತು ಎಲ್ಲಾ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
